ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಹವ್ಯಾಸಿ ಯಕ್ಷಗಾನ ಕಲಾವಿದ ಕುಂಟಿಕಾನ ಶ್ಯಾಮ ಭಟ್‌

ಲೇಖಕರು : ಎಲ್‌. ಎನ್‌. ಭಟ್‌ ಮಳಿಯ
ಬುಧವಾರ, ಮಾರ್ಚ್ 4 , 2015

ಯಕ್ಷಗಾನ ರಂಗದಲ್ಲಿ ಹವ್ಯಾಸಿ ವೇಷಧಾರಿಯಾಗಿ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕುಂಟಿಕಾನ ಶ್ಯಾಮ ಭಟ್ಟರು ಅಭಿನಂದನೀಯ ಸಾಧಕರು.

ಕುಂಟಿಕಾನ ಪರಮೇಶ್ವರ ಭಟ್‌ ಮತ್ತು ಸುಮತಿ ಅವರ ಪುತ್ರ ಶ್ಯಾಮ ಭಟ್‌. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ನೀರ್ಚಾಲಿನಲ್ಲಿ ಪ್ರೌಢಶಾಲೆ ವಿದ್ಯಾಭ್ಯಾಸ, ಮಂಡ್ಯದಲ್ಲಿ ಪದವಿ, ಮಣಿಪಾಲದಲ್ಲಿ ಬಿಎಡ್‌ ವ್ಯಾಸಂಗ. ಕೆಲವು ಖಾಸಗಿ ಶಾಲೆಗಳಲ್ಲಿ ಅಧ್ಯಾಪಕ ವೃತ್ತಿ. ಮತ್ತೆ ಕೇರಳ ಸರಕಾರಿ ಹಿ. ಪ್ರಾ. ಶಾಲೆಗಳಲ್ಲಿ 28 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ. ಜತೆಗೆ ಪ್ರವೃತ್ತಿಯಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡರು.

ಕುಂಟಿಕಾನ ಮಠದಲ್ಲಿ ಆಗಾಗ ನಡೆಯುತ್ತಿದ್ದ ಆಟಕೂಟಗಳಲ್ಲಿ ಪಾಲ್ಗೊಳ್ಳುತ್ತ ಬಾಲ್ಯದಲ್ಲಿಯೇ ಯಕ್ಷಗಾನದತ್ತ ಆಸಕ್ತರಾದರು. ದೊಡ್ಡಪ್ಪ ಕೃಷ್ಣ ಭಟ್ಟರು ಅರ್ಥಗಾರಿಕೆಗೆ ಗುರು. ಉಪ್ಪಳ ಕೃಷ್ಣ ಮಾಸ್ಟರ್‌ ಅವರಿಂದ ತೆಂಕುತಿಟ್ಟು ಯಕ್ಷಗಾನ ನಾಟ್ಯಾಭ್ಯಾಸ. ಕಾರ್ತವೀರ್ಯ, ಕರ್ಣ, ಅರ್ಜುನ, ದಕ್ಷ, ಅತಿಕಾಯ, ಇಂದ್ರಜಿತು, ಗದಾಯುದ್ಧದ ಕೌರವ ಮೊದಲಾದ ಪ್ರಧಾನ ವೇಷಗಳ ಸಮರ್ಥ ನಿರ್ವಹಣೆ ಇವರಿಗೆ ಪ್ರಸಿದ್ಧಿ ಯನ್ನು ತಂದು ಕೊಟ್ಟಿದೆ. ಹೆಣ್ಣು ಬಣ್ಣದ ವೇಷಗಳನ್ನು ಚೆನ್ನಾಗಿ ಮಾಡುತ್ತಾರೆ.ರಾಮ, ಕೃಷ್ಣ, ವಾಲಿ, ಸಂಜಯ, ವಿದುರ ಮೊದಲಾದ ಪಾತ್ರಗಳನ್ನು ಒಳ್ಳೆಯ ಅರ್ಥಗಾರಿಕೆಯಿಂದ ಸೂಕ್ತವಾಗಿ ನಿರ್ವಹಿಸುತ್ತಾರೆ.

ಯಕ್ಷಗಾನ ಬಯಲಾಟ, ತಾಳ ಮದ್ದಳೆಗಳಿಗೆ ಸೂಕ್ತ ಸಮಯಕ್ಕೆ ಆಗಮಿಸಿ ಶಿಸ್ತಿನಿಂದ ಪಾಲ್ಗೊಳ್ಳುವ ಇವರ ಕಲಾಪ್ರೀತಿ ಅನನ್ಯವಾಗಿದೆ. ಅಧ್ಯಾಪಕ ವೃತ್ತಿಯಲ್ಲಿದ್ದಾಗ ಶಾಲಾ ವಿದ್ಯಾರ್ಥಿಗಳನ್ನು ಯಕ್ಷಗಾನಕ್ಕೆ ತರಬೇತಿಗೊಳಿಸಿದ್ದಾರೆ. ಬಾಲಕಿಯರನ್ನು ಯಕ್ಷಗಾನಕ್ಕೆ ಸಿದ್ಧಗೊಳಿಸಿದ್ದು ಇವರ ಮತ್ತೂಂದು ಸಾಧನೆ.

ಕೂಡ್ಲುಮೇಳ, ಉಪ್ಪಳ ಭಗವತೀ ಮೇಳಗಳಲ್ಲಿ ಹಲವಾರು ಬಯಲಾಟ ಗಳಲ್ಲಿ ಶ್ಯಾಮ ಭಟ್ಟರು ಉತ್ತಮ ವೇಷಧಾರಿಯಾಗಿ ಭಾಗವಹಿಸಿದ್ದಾರೆ.

ಅರುವತ್ತರ ಹರೆಯದ ಶ್ಯಾಮ ಭಟ್ಟ ಅವರು ಈಗ ಅಧ್ಯಾಪಕ ವೃತ್ತಿ ಯಿಂದ ನಿವೃತ್ತರಾಗಿದ್ದು ಹವ್ಯಾಸಿಯಾಗಿ ಯಕ್ಷಗಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕುಂಬಳೆ ಸಮೀಪದ ಕುಂಟಿಕಾನದಲ್ಲಿ ನೆಲೆಸಿದ್ದಾರೆ. ಪತ್ನಿ ಸರಸ್ವತಿ ಭಟ್ಟರ ಕಲಾಸೇವೆಗೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಹೊಂದಿದ ಸಂತೃಪ್ತಿಯ ಸಂಸಾರ ಶ್ಯಾಮ ಭಟ್ಟರದು.





ಕೃಪೆ : http://udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ